Monday 24 February 2020

ಮಹಾದಾಯಿ ನ್ಯಾಯಾಧೀಕರಣದ ಐತೀರ್ಪು ಅಧಿಸೂಚನೆಗೆ ಕರ್ನಾಟಕ ಸರ್ಕಾರ ಯಾವುದೇ ಸಮಯ ವಿಳಂಬವಿಲ್ಲದೇ ಪ್ರಯತ್ನ ಮಾಡಬೇಕು





ಮಹಾದಾಯಿ ಜಲವಿವಾದ ನ್ಯಾಯಾಧೀಕರಣವು ಆಗಸ್ಟ್-14, 2018ರಂದು ನೀಡಿರುವ ಐತೀರ್ಪನ್ನು ಅನುಷ್ಠಾನಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಮತ್ತೊಮ್ಮೆ ಗೋವಾ ಸರ್ಕಾರ ತಕರಾರು ಮಾಡುತ್ತಿದೆ. ಸುಪ್ರೀಕೋರ್ಟ್ ನೀಡಿರುವ  ಆದೇಶಕ್ಕೆ ತಡೆ ಕೋರಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಆಶ್ಚರ್ಯ ತಂದಿದ್ದಾರೆ. ಏಕೆಂದರೆ ಮಹಾದಾಯಿ ನ್ಯಾಯಾಧೀಕರಣದ ಐತೀರ್ಪನ್ನು ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸುವ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯ ತನ್ನ ಆಧೇಶ ಹೊರಡಿಸುವ ಮುನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಾದ ವಿವಾದದ ಸಂದರ್ಭದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಧಿಸೂಚನೆ ಪ್ರಕಟಿಸುವುದಕ್ಕೆ ಯಾವುದೇ ತಕರಾರು ಎತ್ತದಿರುವುದು ಮತ್ತು ಪ್ರಸ್ತಾಪಿಸದಿರುವುದು ಫೆಬ್ರವರಿ-20 ರಂದು ಹೊರಡಿಸಿದ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳುವ ಮೂಲಕ ಪ್ರಮೋದ ಸಾವಂತ ನ್ಯಾಯಾಲಯದಲ್ಲಿ ಈಗಾಗಲೇ ತಳೆದಿರುವ ನಿಲುವನ್ನು ವಿರೋದಿಸುವ ಮಟ್ಟಕ್ಕೆ ಹೋಗಿದ್ದಾರೆ. ಅದು ಅಲ್ಲದೇ ಕರ್ನಾಟಕಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಚಾಳಿ ಇದೆ ಎಂದು ಕಪೋಲ ಕಲ್ಪಿತ ಆರೋಪವನ್ನು ಮಾಡಿದ್ದಾರೆ. ಕಾನೂನಿನ ಆಡಳಿತದಲ್ಲಿ ನಂಬಿಕೆ ಇಟ್ಟಿರುವ ಕರ್ನಾಟಕ ರಾಜ್ಯ ಯಾವಾಗಲೂ ನ್ಯಾಯಾಂಗ ಸಂಸ್ಥೆಆದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿಲ್ಲ. ಇಂಥ ಆರೋಪಗಳನ್ನು ಮಾಡುವ ಮೂಲಕ ತನ್ನ ಸಣ್ಣತನವನ್ನು ಗೋವಾ ಮತ್ತೊಮ್ಮೆ ಸಾಬೀತುಪಡಿಸಿದೆ.
ಮಹಾದಾಯಿ ನ್ಯಾಯಾಧೀಕರಣದ ಐತೀರ್ಪು ಅಧಿಸೂಚನೆಗೆ ಕರ್ನಾಟಕ ಸರ್ಕಾರ ಯಾವುದೇ ಸಮಯ ವಿಳಂಬವಿಲ್ಲದೇ ಪ್ರಯತ್ನ ಮಾಡಬೇಕು. ಇನ್ನು ಎರಡು ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ಕರ್ನಾಟಕದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ತಕ್ಷಣ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಧಿಸೂಚನೆ ಪ್ರಕಟಿಸುವಂತೆ ಮಾಡಬೇಕು.  ಇಷ್ಟೆ ಅಲ್ಲದೇ ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಮಹಾದಾಯಿ ಯೋಜನೆಗೆ ಪ್ರಸ್ತುತ ಅಗತ್ಯವಿರುವ 2000 ಕೋಟಿ ರೂಪಾಯಿಗಳ ಅನುದಾನವನ್ನು ಇದೇ ಮುಂಗಡ ಪತ್ರದಲ್ಲಿ ಘೋಷಣೆ ಮಾಡಬೇಕು. ಇದಲ್ಲದೇ ಸಾಕಷ್ಟು ಸಮಯ ವಿಳಂಬವಾಗಿರುವುದರಿಂದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಲು ನೀರಾವರಿ ಸಚಿವರನ್ನು ಒತ್ತಾಯಿಸುತ್ತೇನೆ.
ಮಹಾದಾಯಿ ಜಲವಿವಾದವು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿದ್ದು ಮೊದಲ ಎರಡು ದಶಕಗಳಲ್ಲಿ ಯಾವುದೇ ಪ್ರಗತಿ ಸಾಧಿಸಿರಲಿಲ್ಲ. 1999-2004ರ ಅವಧಿಯ ಕಾಂಗ್ರೆಸ್ ಪಕ್ಷದ ಸರ್ಕಾರದ ಕಾಲದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದಿಂದ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ಪಡೆಯಲಾಯಿತು. ರಾಜಕೀಯ ಕಾರಣಗಳಿಗಾಗಿ ಗೋವಾದ ಒತ್ತಡಕ್ಕೆ ಮಣಿದ ಕೇಂದ್ರದ ಅಂದಿನ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ತಾತ್ವಿಕ ಒಪ್ಪಿಗೆ ತಡೆಹಿಡಿದಿತ್ತು. ಗೋವಾದೊಂದಿಗೆ ಕಳೆದ ಹಲವಾರು ಅಂತರಾಜ್ಯ ಸಭೆಗಳ ನಂತರ  2003ರಲ್ಲಿ ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿಯ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಗೋವಾ ಸರ್ಕಾರವು ತಾತ್ವಿಕ ಆದೇಶ ನೆನೆಗುದಿಯಲ್ಲಿಡುವ ಆದೇಶ ಪಡೆದಿದ್ದರಿಂದ ಮುಂದೆ ಯಾವುದೇ ಪ್ರಗತಿ ಸಾಧಿಸಲಾಗಲಿಲ್ಲ. ನ್ಯಾಯಾಧೀಕರಣದ ಮೊರೆ ಹೋದ ಕರ್ನಾಟಕ ಸರ್ಕಾರ ತನ್ನ ಪಾಲಿನ ನೀರನ್ನು ಪಡೆದುಕೊಳ್ಳುವಲ್ಲಿ ಬಾಗಶಃ ಯಶ ಕಂಡಿತು. ಈ ಹಿನ್ನೆಲೆಯಲ್ಲಿ ಈಗ ಬಂದಿರುವ ನ್ಯಾಯಾಧೀಕರಣದ ಆದೇಶ ಮತ್ತು ಸರ್ವೋಚ್ಚ ನ್ಯಾಯಾಲಯದ ಫೆಬ್ರುವರಿ-20ರ ಆದೇಶಗಳು ಕರ್ನಾಟಕಕ್ಕೆ ಪೂರ್ಣವಲ್ಲದಿದ್ದರೂ ಅಲ್ಪಮಟ್ಟಿನ ಸಮಾಧಾನ ತಂದಿದೆ. ತಕ್ಷಣ ಕರ್ನಾಟಕ ಸರ್ಕಾರ ಯಾವುದೇ ವಿಳಂಬವಿಲ್ಲದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅಧಿಸೂಚನೆ ಪ್ರಕಟಣೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಸ್ತುತ 2020-21ರ ಮುಂಗಡ ಪತ್ರದಲ್ಲಿಯೇ 2000 ಕೋಟಿ ರೂಪಾಯಿ ಹಣಕಾಸು ಒದಗಿಸುವಂತೆ ಹಾಗೂ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸುತ್ತೇನೆ.
-ಎಚ್.ಕೆ.ಪಾಟೀಲ, ಮಾಜಿ ಸಚಿವರು

Tuesday 11 February 2020

ಅಂಗನವಾಡಿ ಮಕ್ಕಳು, ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುವ ಆಹಾರದ ಪೂರೈಕೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ಶಿಸ್ತು  ಕ್ರಮಕ್ಕೆ ಮುಂದಾದ ಜಿಲ್ಲಾ ಪಂಚಾಯತ್






ಅಂಗನವಾಡಿ ಮಕ್ಕಳು, ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುವ ಆಹಾರದ ಪೂರೈಕೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ಶಿಸ್ತು  ಕ್ರಮಕ್ಕೆ ಮುಂದಾದ ಜಿಲ್ಲಾ ಪಂಚಾಯತ್


ಗದಗ ಜಿಲ್ಲೆಯ ಮಹಿಳಾ ಮತ್ತು  ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆ:ಮಾದರಿ ಅಂಗನವಾಡಿ ಕೇಂದ್ರಗಳಿಗಾಗಿ ಶ್ರಮಿಸಿ: ಅಂಗನವಾಡಿ ಮಕ್ಕಳು, ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುವ ಆಹಾರದ ಪೂರೈಕೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ಶಿಸ್ತು  ಕ್ರಮ ಜರುಗಿಸಲಾಗುವುದು ಎಂದು  ಎಚ್ಚರಿಕೆ ನೀಡಿದ್ದೇನೆ .       . ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಸರಬರಾಜು ಮಾಡುವುದಕ್ಕೆ ಮಧ್ಯವರ್ತಿಗಳನ್ನು ನೇಮಿಸಿಬಾರದು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಜನಪ್ರತಿನಿಧಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಇನ್ನು ಅಂಗನಾವಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಕುರಿತಂತೆ ದೂರುಗಳು ಇರದಂತೆ ನಿಗಾವಹಿಸಬೇಕೆಂದು ತಿಳಿಸಿದ್ದೇನೆ .      ಜಿಲ್ಲೆಯಾದ್ಯಾಂತ 1166 ಅಂಗನವಾಡಿ ಕೇಂದ್ರಗಳಿದ್ದು, 863 ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಇನ್ನುಳಿದವುಗಳು ಸರ್ಕಾರಿ ಶಾಲೆ, ಸಮುದಾಯ ಭವನ, ಬಾಡಿಗೆ ಕಟ್ಟಡ, ದೇವಸ್ಥಾನ, ಯುವಕ ಮಂಡಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿವೆ. 39 ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿದ್ದು, 64 ಕೇಂದ್ರಗಳಿಗೆ ನಿವೇಶನವಿದ್ದರೂ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ನೆರೆ ಸಂದರ್ಭದಲ್ಲಿ ಜಿಲ್ಲೆಯ 67 ಅಂಗನವಾಡಿ ಕೇಂದ್ರಗಳ ದುರಸ್ಥಿ ಕಾರ್ಯಕ್ಕೆ ಅಂದಾಜು 91.66 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ . ನಿವೇಶನವಿರುವ ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು. ಸಂಬಂದಿಸಿದ  ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿಯೇ ತಾತ್ಕಾಲಿಕ ವ್ಯವಸ್ಥೆಗೆ ಪ್ರಯತ್ನಿಸಲಾಗುವದು. ಜಿಲ್ಲೆಯಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನ ಮಾಡಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದ್ದೇನೆ .

Saturday 8 February 2020

ಶೈಕ್ಷಣಿಕವಾಗಿ ಜಿಲ್ಲೆಯನ್ನು ಮುಂದುವರಿಸಲು ಪಣತೊಟ್ಟ ಜಿಲ್ಲಾ ಪಂಚಾಯತ್ ಅಧ್ಯಕ್ಷರು



ಗದಗ  ಜಿಲ್ಲೆಯ  ಸರ್ಕಾರಿ  ಶಾಲೆಗಳಲ್ಲಿ  ಶಾಲಾಮಕ್ಕಳಿಗೆ  ಮೂಲಭೂತ ಸೌಕರ್ಯ ಒದಗಿಸಲು ಮಾನ್ಯಶ್ರೀ ಹೆಚ್ .ಕೆ.ಪಾಟೀಲ್ ಸಾಹೇಬರ  ಸಮ್ಮುಖದಲ್ಲಿ   ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಮಾನ್ಯಶ್ರೀ ಸುರೇಶ ಕುಮಾರ್ ಅವರಿಗೆ ಮನವಿಮಾಡಲಾಯಿತು  ಹಾಗೂ ಗದಗ್ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಶಾಲೆಯ ಸಮಸ್ಯೆಗಳನ್ನು  ಪರಿಹರಿಸಲು ನಿರ್ಧರಿಸಲಾಯಿತು

ಗದಗ ನಗರದ ಖಾನತೋಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂಬರ -೨ .ಭೇಟಿ ನೀಡಿ ವಿದ್ಯಾರ್ಥಿನಿ ಸಹೋದರಿಯರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ,ಬಿಸಿಯೂಟದಲ್ಲಿ ಸಾಕಷ್ಟು ತೊಂದರೆ ಕಂಡುಬಂಧಿದ್ದರಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಒಂದು ವಾರದಲ್ಲಿ ಸರಿಪಡಸದಿದ್ದಲ್ಲಿ ಸೂಕ್ತಕ್ರಮ ಜರುಗಿಸಲು ಆದೇಶ ಮಾಡಿದ್ದೇನೆ .

Wednesday 1 January 2020

ಸರ್ಕಾರ ಯಾವುದಾದರೇನು ಜಿಲ್ಲೆಗೆ ಬೇಕಿರುವುದು ಪ್ರಗತಿ




ಸರ್ಕಾರ ಯಾವುದಾದರೇನು ಜಿಲ್ಲೆಗೆ ಬೇಕಿರುವುದು ಪ್ರಗತಿ ಇದು ಗದಗ ಜಿಲ್ಲೆಯಲ್ಲಿ ಅಕ್ಷರಶಃ ಸತ್ಯ ವಾಗಿದೆ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು
ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಸೇವೆ ನೀಡಲು MRI ಸ್ಕ್ಯಾನ್ ಸೆಂಟರ್ ಉದ್ಘಾಟನಾ ಸಮಾರಂಭ ನೆರವೆರಿಸಿದ್ದು.. ರಾಜ್ಯದ ಮೊಟ್ಟಮೊದಲ ಉಚಿತವಾಗಿ ಸೇವೆಸಲ್ಲಿಸುವ MRI ಸ್ಕ್ಯಾನ್ ಸೆಂಟರ್ ಗದಗನಲ್ಲಿ ಮಾತ್ರ ..

Sunday 7 April 2019

ಡಿ ಆರ್ ಪಾಟೀಲ್ ಜಿ ಅವರ ಆಗಮನ ಹಾವೇರಿ ಕ್ಷೇತ್ರದ ಬಿಜೆಪಿ ಪಡೆಗೆ ನಡುಕ ಹುಟ್ಟಿಸಿದೆ ಯಾ ??

http://hkpatilsupporters.blogspot.com/





ಸೋಲಿಲ್ಲದ  ಸರದಾರನಿಗೆ ಹೆದರುತ್ತಿದೆಯಾ ಬಿಜೆಪಿಯ ಪಡೆ??

ಕ್ಷೇತ್ರದ ತುಂಬಾ ಹೆಚ್ಚುತ್ತಿರುವ ಡಿ ಆರ್ ಅಲೇ ಸಚಿನ ಮುಂದಾಳತ್ವದಿಂದ ಹೆಚ್ಚಾದ ಹುರುಪು...

ಗದಗ:ದಿನಕಳೆದಂತೆ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ ಆರ್ ಪಾಟೀಲ ಪರ ಆಯಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಸಚಿವರು ತಮ್ಮ ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ಕಾರ್ಯಕರ್ತರೊಂದಿಗೆ ಮತ ಯಾಚನೆ ಮಾಡುತ್ತಿರುವುದು ವಿಶೇಷವಾಗಿದೆ.
ಇನ್ನೂ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಯುವ ನಾಯಕ ಸಚಿನ ಪಾಟೀಲ ತಮ್ಮ ತಂದೆಯವರನ್ನ ಲೋಕಸಭೆಗೆ ಕಳುಹಿಸಿಯೇ ಸಿದ್ದ ಎಂದು ತಾವೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಲವಾರು ತಂತ್ರ ಪ್ರತಿತಂತ್ರ ಹೆಣೆದು ಗೆಲುವಿಗೆ ತಮ್ಮ ಹಾದಿಯನ್ನು ಸುಗಮವಾಗಿಸಿಕೊಳ್ಳುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇವರ ನಡೆಯಿಂದ ವಿರೋಧಿ ಪಕ್ಷ ಬಿಜೆಪಿಗೆ ಕೆಲ ಕ್ಷೇತ್ರದಲ್ಲಿ ಚಟುವಟಿಕೆ ತೊರಲಾಗದೆ ಕಂಗಾಲಾಗಿದೆ.

Saturday 10 November 2018

ನರೇಂದ್ರ ಮೋದಿಯವರ ಒಂದು ದಿನದ ಊಟದ ಖಚು೯ ಎಷ್ಟು ಗೊತ್ತಾ ಖಂಡಿತ ನಿಮಗೆ ಆಶ್ಚರ್ಯವಾಗುತ್ತದೆ



ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸದ ಕುರಿತು ಯಾವಾಗಲೂ ಚರ್ಚೆಯಲ್ಲಿ ದ್ದಾರೆ ಮತ್ತು 2019 ರಲ್ಲಿ ಪ್ರಧಾನಮಂತ್ರಿಯಾಗಲು ದೊಡ್ಡ ಅಭ್ಯರ್ಥಿ ಆಗಿರುತ್ತಾರೆ ಮತ್ತು ನಾವು ಅವ ರಿಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಸಂಗತಿಯನ್ನು ಹೇಳುತ್ತೇವೆ, ಆದ್ದರಿಂದ ಕೊನೆಯವರೆಗೂ ದಯವಿಟ್ಟು ಲೇಖನವನ್ನು ಓದಿ.


ಸರಕಾರದಿಂದ ಪ್ರತಿ ವರ್ಷವೂ ನರೇಂದ್ರ ಮೋದಿಗೆ 19 ಲಕ್ಷ ರೂ. ಗೆ ದೊರೆಯುತ್ತದೆ. ಇದರರ್ಥ ಅವರ ವೇತನ ಎಂದು ಕರೆಯಬಹುದು, ಅಂದರೆ ಅವರ 1 ವರ್ಷದ ವೇತನವು 1900000 ಆದರೆ ಆರ್ಟಿಐ ವರದಿಯ ಪ್ರಕಾರ ನರೇಂದ್ರ ಮೋದಿ ಅವರ ಆಹಾರ ವೆಚ್ಚಕ್ಕಾಗಿ ಸರ್ಕಾರದಿಂದ ಅವರು ಒಂದು ರೂಪಾಯಿ ಗಳನ್ನು ಸಹ ತೆಗೆದುಕೊಳ್ಳುವುದಿಲ್ಲ ಮತ್ತು ಊಟದ ಖರ್ಚನ್ನು ಸಂಬಳದೊಂದಿಗೆ ಕಳೆಯುತ್ತಾರೆ. ತಮ್ಮ ಆಹಾರವನ್ನು ಅಡುಗೆ ಮಾಡುವವರು ಸಹ ಗುಜರಾತ್ನಿಂದ ಬಂದಿದ್ದಾರೆ ಮತ್ತು ಆಹಾರವನ್ನು ನೀಡುತ್ತಾರೆ ಅವರ ಒಂದು ದಿನದ ಊಟದ ಖರ್ಚು ಸರಿಸುಮಾರು ಐದು ಸಾವಿರ ರೂಪಾಯಿಗಳಷ್ಟು ಆಗುತ್ತದೆ ವಿಶೇಷವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ಹಾರಗಳನ್ನು ಅವರಿಗೆ ನೀಡಲಾಗುತ್ತದೆ.

Sunday 23 September 2018

ನಾಡು ಕಂಡ ಕಳಂಕರಹಿತ ರಾಜಕಾರಣಿ











 ನಾಡು ಕಂಡ ಕಳಂಕರಹಿತ ರಾಜಕಾರಣಿ ತಮ್ಮ ಕಾರ್ಯವೈಖರಿಯಿಂದ ರಾಷ್ಟ್ರರಾಜಕಾರಣದಲ್ಲಿ..
ಸಂಚಲನ ಮೂಡಿಸಿ.
ಗ್ರಾಮೀಣಾಭಿವ್ರದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಬ್ರಷ್ಟಚಾರದಿಂದಮುಕ್ತಗೊಳಿಸಿ
ಗ್ರಾಮೀಣಭಾಗದ ಜನಸಾಮಾನ್ಯರಿಗೂ
ಶುಧ್ದನೀರನ್ನು ಪೂರೈಸಿ......
ದೇಶದಲ್ಲಿಯೇ ಪ್ರಥಮವಾಗಿ
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಕರ್ನಾಟಕದಲ್ಲಿ ಜಾರಿಗೆತಂದು..
ಮಹತ್ತರ ಬದಲಾವಣೆ ಮಾಡಿ...ಕೇಂದ್ರ ಸರ್ಕಾರದಿಂದ ಸತತವಾಗಿ ನಾಲ್ಕುಬಾರಿ ಪ್ರಥಮ ಬಹುಮಾನವನ್ನು ಕರುನಾಡಿಗೆ ತಂದುಕೊಟ್ಟಂತಹ ಕೀರ್ತಿ
ಮಾನ್ಯ ಶ್ರೀ ಎಚ್.ಕೆ.ಪಾಟೀಲರವರಿಗೆ ಸಲ್ಲುತ್ತದೆ...
ಉತ್ತರ ಕರ್ನಾಟಕದ ಏಳಿಗೆಗೆ  ಜನ ಸಾಮಾನ್ಯರು ಯಚ್ಚೇತ್ತುಕೋಳ್ಳಬೇಕಿದೆ ಪಕ್ಷ ಗಳಿಗಾಗಿ ಗೂದ್ದಾಡುವ ಬದಲು ಉತ್ತರ ಕರ್ನಾಟಕದ ನಾಯಕರನ್ನು  ಬೆಳೆಸಬೇಕಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಪಥದತ್ತ ಸಾಗಬೇಕು ಯುವಕರು ಕೆಲಸಕ್ಕಾಗಿ ಗೂಳೆ ಹೋಗುವದನ್ನು ನಿಲ್ಲಿಸಬೇಕಿದೆ ನಮ್ಮಲ್ಲಿನೆ ಕೆಲಸಗಳನ್ನು ಹುಟ್ಟಿಸಬೇಕಿದೆ ಉತ್ತರ ಕರ್ನಾಟಕದ ಅತ್ಯಂತ ಪ್ರಭಾವಿ ನಾಯಕರು ಹಾಗೂ ಉತ್ತರ ಕರ್ನಾಟಕದ ವಿಷಯದಲ್ಲಿ ಕುಂದುಕೊರತೆಗಳು ಬಂದಾಗ ಧ್ವನಿ ಎತ್ತಿದವರು.ತಮಗೆ ದೊರೆತ ಕೆಲಸವನ್ನು ಅಚ್ಚುಕಟ್ಟಾಗಿ ನಿವ೯ಹಿಸಿ  ಸತತವಾಗಿ  ನಾಲ್ಕು ವರ್ಷಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಭಾರತ ದೇಶದಲ್ಲಿ ಪ್ರಥಮ ಸ್ಥಾನ ಪಡೆದು ಎದುರಾಳಿಗಳಿಂದಲೆ ಬೇಶ್ ಎಂದೆನಿಸಿಕೊಂಡ ಹೆಚ್ ಕೆ ಪಾಟೀಲ ರವರಂತಹ ನಾಯಕರಿಗೆ ಸಚಿವ ಸ್ಥಾನ ಕೊಡದೇ ಇರುವುದು  ನ್ಯಾಯವೇ?  
ಪ್ರಸ್ತುತ ಕರ್ನಾಟಕದ ಮೈತ್ರಿ ಸರ್ಕಾರದ ಸಚಿವ  ಸಂಪುಟ ರಚನೆಯ ವೇಳೆ ಕೊನೆಯ ಕ್ಷಣದಲ್ಲಿ   
ಎಚ್.ಕೆ.ಪಾಟೀಲರನ್ನು ಕೈ ಬಿಡಲಾಗಿದ್ದು ತೀವ್ರ ಬೇಸರವನ್ನುಂಟುಮಾಡಿದೆ......
ಮಾನ್ಯ ಶ್ರೀ ಎಚ್.ಕೆ.ಪಾಟೀಲರಿಗೆ
ಅತಿ ಶೀಘ್ರವಾಗಿ ಸಚಿವ ಸ್ಥಾನವನ್ನು ನೀಡಬೇಕೆಂದು ವರೀಷ್ಠರಲ್ಲಿ ವಿನಂತಿಸಿಕೋಳ್ಳುತ್ತೇವೆ..........