Tuesday 12 June 2018

ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ

ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ


ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ


ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ತಮ್ಮ ವಿರುದ್ಧ ಭೋಗಸ್ ಮತದಾನದ ಆರೋಪ ಹೊರಿಸಿದ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಮೊನ್ನೆಯಷ್ಟೇ ಗದಗದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಿ ಶ್ರೀರಾಮುಲು ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿದ್ದ ಗೆದ್ದಿದ್ದಾರೆ. ಈ ಬಗ್ಗೆ ಬಿಜೆಪಿ ವತಿಯಿಂದ ಚುನಾವಣಾಧಿಕಾರಿಗಳಿಗೆ ದೂರು ನೀಡಿ ಅವರ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯಿಸಲಾಗುವುದು ಎಂದಿದ್ದರು.

ಇದಕ್ಕೆ ಸಿಟ್ಟಿಗೆದ್ದಿರುವ ಶಾಸಕ ಎಚ್ ಕೆ ಪಾಟೀಲ್, ಇಷ್ಟಕ್ಕೇ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅಸ್ತ್ರಕ್ಕೆ ಪ್ರತಿ ಅಸ್ತ್ರ ಸಿದ್ಧವಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಿಲ್ಲ. ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.

ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚಿವ! ಯಾರು ಆ ಮಂತ್ರಿ?

ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚಿವ! ಯಾರು ಆ ಮಂತ್ರಿ?

ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ. ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.



ದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು.


ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಮತ್ತೆ ಹಾಕ್ತೀಯಾ?: ಅಭಿಮಾನಿಗೆ ಸಿದ್ದರಾಮಯ್ಯ ಪ್ರಶ್ನೆ!


ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಬಂದು ಮೈತ್ರಿ ಸರ್ಕಾರ ಬಂದ ನಂತರ ಅಧಿಕಾರದಿಂದ ದೂರ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ನಿರೀಕ್ಷಿತ ಮಟ್ಟದಲ್ಲಿ ಪಲಿತಾಂಶ ಬಾರದ ಕಾರಣ ಕಾಂಗ್ರೆಸ್ ನಲ್ಲಿ ಇದೀಗ ತನ್ನ ಹಿಂದಿನ ಪ್ರಭಾವ ಉಳಿಸಿಕೊಂಡಿಲ್ಲ, ಬೇರೆ ನಾಯಕರು ಓವರ್ ಟೇಕ್ ಮಾಡಲು ತುದಿಗಾಲಿನಲ್ಲಿ ನಿಂತಿರುವುದು ಗೊತ್ತೇ ಇದೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯನವರು ‘ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಯಾಕೆ ಈಗ ಮತ್ತೆ ಟೋಪಿ ಹಾಕ್ತಿಯಪ್ಪ’ ಎಂದು ಸನ್ಮಾನ ಮಾಡಲು ಬಂದ ಅಭಿಮಾನಿಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಣಲು ಮೈಸೂರಿನ ನಿವಾಸಕ್ಕೆ ಆಗಮಿಸಿದ ಅಭಿಮಾನಿ ಸರ್, ನಿಮಗೆ ಸನ್ಮಾನ ಮಾಡಬೇಕು ಎಂದಿದ್ದಾನೆ ಆಗ ಸಿದ್ದರಾಮಯ್ಯ ಕೈ ಸನ್ನೆ ಮೂಲಕ ಬಾ ಎಂದು ಕರೆದಿದ್ದಾರೆ. ಶಾಲು ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋಗಾದ ಹೇ ಇದೆಲ್ಲಾ ಯಾಕಪ್ಪ ಎಂದ ಸಿದ್ದರಾಮಯ್ಯ, ಜನರೇ ಟೋಪಿ ಹಾಕಿದ್ರು. ಇದೆಲ್ಲ ಯಾಕಪ್ಪ ಅಂತಾ ನಗುತ್ತಲೇ ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡರು.

ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ ಅಲ್ಲವಾ?


ಭಾರತ ದೇಶದಲ್ಲಿ ಸತತ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟಾದರೂ
    ಶ್ರೀ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಈ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೂಡದೇ ಇರುವುದು  ಎಷ್ಟರ ಮಟ್ಟಿಗೆ ಸರಿ.ಇದು ನಮ್ಮ ನಾಯಕರಿಗೆ ಮಾಡಿದ ಅನ್ಯಾಯ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ
 ರಾಜ್ಯ ಮತ್ತು ಕೇಂದ್ರ ದ ನಾಯಕರು ಇದನ್ನು ಸರಿಪಡಿಸಿ ಶ್ರೀ. ಹೆಚ್. ಕೆ ಪಾಟೀಲ ರಿಗೆ ಸಚಿವ ಸ್ಥಾನ ಕೊಡಲೇಬೇಕು.
   ಎಲ್ಲರೂ ಶೇರ ಮಾಡಿ