ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಈ ಹೊಸ ಯೋಜನೆಯಡಿಯಲ್ಲಿ 1.50 ಲಕ್ಷ ರೂ ವರೆಗಿನ ಉಚಿತ ಚಿಕಿತ್ಸೆ ಸಿಗಲಿದೆ.!
ಸರ್ಕಾರದಿಂದ ಸಾರ್ವಜನಿಕರ ಒಳಿತಿಗಾಗಿ ಹಾಗು ಬಡವರ ಹಾಗು ಮಧ್ಯಮವರ್ಗದವರ ಸಹಾಯಕ್ಕೆ ಸರ್ಕಾರ ಈ ಯೋಜನೆಯನ್ನು ತರುವ ಉದ್ದೇಶವನ್ನೊಂದಿದೆ. ಈ ಕಾರ್ಡ್ ಇದ್ರೆ ಸಾಕು ನೀವು ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ಕಟ್ಟುವ ಅವಶ್ಯಕತೆ ಇಲ್ಲ.
ಅಷ್ಟಕ್ಕೂ ಈ ಯೋಜನೆ ಯಾವುದು.? ಇದನ್ನು ಪಡೆಯುವುದು ಹೇಗೆ .? ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ನೋಡಿ..
ರಾಜ್ಯ ಸರ್ಕಾರ ಆರೋಗ್ಯಭಾಗ್ಯ ಅನ್ನೋ ಯೋಜನೆಯನ್ನು ರೂಪಿಸಿದೆ ಈ ಯೋಜನೆಯಡಿಯಲ್ಲಿ ನೀವು ಉಚಿತ ಚಿಕಿತ್ಸೆ ಸೌಲಭ್ಯವನ್ನು ಪಡೆಯಬುದು.
ಆಸ್ಪತ್ರೆಗಳಲ್ಲಿ ಯುನಿವರ್ಸೆಲ್ ಹೆಲ್ತ್ ಕಾರ್ಡ್ ಎಂಬುದಾಗಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೊಡಬೇಕಾದ ದಾಖಲಾತಿ ರೇಷನ್ ಕಾರ್ಡ್ ವೋಟರ್ ID ಹಾಗು ೧೦ ರೂಪಾಯಿ ಕೊಟ್ಟು ಈ ಕಾರ್ಡ್ ಪಡೆಯಬೇಕು. ಈ ಯೋಜನೆಯಡಿಯಲ್ಲಿ BPL ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಿರುತ್ತದೆ, APL ಕಾರ್ಡ್ ಹೊಂದಿರುವರು 30 % ರಿಯಾಯಿತಿ ಪಡೆದು ಚಿಕಿತ್ಸೆ ಪಡೆಯಬೇಕಾಗುತ್ತದೆ.
ನಿಗದಿತ ದ್ವಿತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.30.000/-ಗಳ ಚಿಕಿತ್ಸೆ. ನಿಗದಿ ತೃತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.1.50.000/-ಗಳು ಈ ಹಣ ಮುಗಿದ ನಂತರ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ರೂ.50.000/-ಗಳ ಚಿಕಿತ್ಸೆ,