Thursday 5 July 2018

ಬಹುನಿರೀಕ್ಷಿತ ರೈತರ ಸಾಲ ಮನ್ನಾ.ಪ್ರತಿ ರೈತ ಕುಟುಂಬದ ಎರಡು ಲಕ್ಷ ಮೊತ್ತದ ಹಣವನ್ನು ಮನ್ನಾ ಮಾಡಲಾಗಿದೆ, ರೈತರ ಸಾಲಮನ್ನಕ್ಕಾಗಿ ಸರಿ ಸುಮಾರು 34 ಸಾವಿರ ಹಣವನ್ನು ಸಾಲಮನ್ನಾಕ್ಕಾಗಿ ಮೀಸಲಿಡಲಾಗಿದೆ








ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ಚೊಚ್ಚಲ ಬಜೆಟ್ ಅಂತೂ ಮಂಡನೆಯಾಗಿದ್ದು, ರೈತರ 2 ಲಕ್ಷ ರೂ. ಸಾಲ ಮನ್ನಾ ಘೋಷಣೆಯೊಂದಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಮಾತನ್ನುಉಳಿಸಿಕೊಂಡಿದ್ದಾರೆ.

ಸಾಲ ಮನ್ನಾಕ್ಕಾಗಿ 34 ಸಾವಿರ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಒಟ್ಟು 2, 13, 734 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿರುವ ಕುಮಾರಸ್ವಾಮಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿ ಆರಂಭಕ್ಕೆ ಮುಂದಾಗಿದ್ದಾರೆ.

ಮದ್ಯ, ಡೀಸೇಲ್ ದರದಲ್ಲಿ ಏರಿಕೆಯಾಗಿದ್ದು, ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೂ ಕುಮಾರಸ್ವಾಮಿ ಮುಂದಾಗಿದ್ದಾರೆ.

ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜತೆಗೆ ಮಂಡ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ