Monday 25 June 2018

ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸರ್ಕಾರದಲ್ಲಿ ನೀವು ಹೆಚ್.ಡಿ ಕುಮಾರ ಸ್ವಾಮಿಯ ಮಾತಿನಂತೆ ನಡೆದುಕೊಳ್ಳುವುದಕ್ಕೆ ಮುಂದಾದರೆ ನನ್ನ ಬೆಂಬಲಿಗರ ಜೊತೆಗೆ ನಾನು ಏನು ಅಂತ ತೋರಿಸುವೆ






ಸ್ಪೆಷಲ್ ಡೆಸ್ಕ್: ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬರುತ್ತಿದ್ದ ಹಾಗೇ ದೋಸ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಖಾತೆ ಖ್ಯಾತೆ ಮುಗಿದ ನಂತರ ಶುರುವಾಗಿರುವುದು,  ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾ.

ಇವೆಲ್ಲದರ ನಡುವೆ ಧರ್ಮಸ್ಥಳದ ಶಾಂತಿನಿವಾಸದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಾ ರಾಜಕೀಯ ಚದುರಂಗಾಟವನ್ನು ಆಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಆದ ದಾಳವನ್ನು ಉರುಳುಸುತ್ತಿದ್ದಾರೆ.

ಇವೆಲ್ಲದರ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಹಿಡಿತವನ್ನು ಹೊಂದುವ ನಿಟ್ಟಿನಲ್ಲಿ ಬಜೆಟ್ ಹಾಗೂ ಸಾಲಮನ್ನ ಮಾಡುವುದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನೆನ್ನುವ ನಾನು ಒಬ್ಬ ಇದ್ದೇನೆ, ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸರ್ಕಾರದಲ್ಲಿ ನೀವು ಹೆಚ್.ಡಿ ಕುಮಾರ ಸ್ವಾಮಿಯ ಮಾತಿನಂತೆ ನಡೆದುಕೊಳ್ಳುವುದಕ್ಕೆ ಮುಂದಾದರೆ ನನ್ನ ಬೆಂಬಲಿಗರ ಜೊತೆಗೆ ನಾನು ಏನು ಅಂತ ತೋರಿಸುವೆ ಎನ್ನುವುದನ್ನು ಕೂಡ  ಹೈಕಮಾಂಡ್ ಗೆ ಸ್ಪಷ್ಟವಾಗಿ ರವಾನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಒಂದು ವೇಳೆ ಈ ಬಾರಿ ಏನಾದ್ರೂ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನದಂತಹ  ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದರೆ ತಾವು ಈ ಹಿಂದೆ ಮಾಡಿದ “ಭಾಗ್ಯ”ಗಳು ಕೊನೆಯಾಗಲಿದೆ. ಇದಲ್ಲದೇ ತಾವು ರೈತರ ಸಾಲಮನ್ನ ಘೋಷಣೆ ಕೂಡ  ನಾನು ಮುಖ್ಯಮಂತ್ರಿಯಾಗಿ ಮಾಡಿದ್ದ ಕೆಲಸವು ನೀರಿನಲ್ಲಿ ಕೊಚ್ಚಿಕೊಂಡ ಹಾಗೇ ಆಗುತ್ತದೆ. ನಾನು ರಾಜ್ಯದ ಜನತೆಗೆ ನೀಡಿರುವ “ಭಾಗ್ಯ”ಗಳು ಇನಷ್ಟು ದಿವಸಗಳ ಕಾಲ ಜನರ ಮನಸ್ಸಿನಲ್ಲಿ ಇರಬೇಕು, ಇದಕ್ಕೆ ಮುಂದಿನ ಲೋಕಸಭಾ ಚುನಾವಣೆಯ ತನಕ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು, ಜೊತೆಗೆ ತಮ್ಮ ಬೆಂಬಲಿಗರಿಗೆ ರಾಜ್ಯ ಸರ್ಕಾರದಲ್ಲಿ ಉತ್ತಮ ಸ್ಥಾನಗಳನ್ನು ಕೊಡಿಸಿ, ಆ ಮೂಲಕ ಕಾಂಗ್ರೆಸ್ ನಲ್ಲಿ ತಮ್ಮ ಹಿಡಿತವನ್ನು ಹಿಡಿದು ಇಟ್ಟುಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಇವೆಲ್ಲದರ ನಡುವೆ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಹಿರಂಗವಾಗಿ ಇಂದು ತಮ್ಮ ಬಜೆಟ್ ಹಾಗೂ ಸಾಲಮನ್ನಾವನ್ನು ಮಾಡುವ ಬಗ್ಗೆ ಸಿದ್ದರಾಮಯ್ಯ ಅವರು ಅಡ್ಡಕಾಲು ಹಾಕುತ್ತಿರುವುದಕ್ಕೆ ಬೇಸರ ವ್ಯಕ್ತವಾಗಿದೆ.



No comments:

Post a Comment