ಶ್ರೀ ಮಾನ್ಯ ಹೆಚ್ ಕೆ ಪಾಟೀಲ ಅಭಿಮಾನಿಗಳು

Blog Archive

  • ►  2020 (4)
    • ►  February (3)
      • ►  Feb 24 (1)
      • ►  Feb 11 (1)
      • ►  Feb 08 (1)
    • ►  January (1)
      • ►  Jan 01 (1)
  • ►  2019 (1)
    • ►  April (1)
      • ►  Apr 07 (1)
  • ▼  2018 (13)
    • ▼  November (1)
      • ▼  Nov 10 (1)
        • ನರೇಂದ್ರ ಮೋದಿಯವರ ಒಂದು ದಿನದ ಊಟದ ಖಚು೯ ಎಷ್ಟು ಗೊತ್ತಾ ಖಂ...
    • ►  September (1)
      • ►  Sept 23 (1)
        • ನಾಡು ಕಂಡ ಕಳಂಕರಹಿತ ರಾಜಕಾರಣಿ
    • ►  July (1)
      • ►  Jul 05 (1)
        • ಬಹುನಿರೀಕ್ಷಿತ ರೈತರ ಸಾಲ ಮನ್ನಾ.ಪ್ರತಿ ರೈತ ಕುಟುಂಬದ ಎರಡು...
    • ►  June (10)
      • ►  Jun 26 (1)
        • ಹೆಚ್ ಡಿ ಕುಮಾರಸ್ವಾಮಿಯವರ ನಡೆಗೆ ಸಿದ್ದರಾಮಯ್ಯ ಗರಂ?
      • ►  Jun 25 (2)
        • ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ...
        • ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸ...
      • ►  Jun 19 (1)
        • ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಈ ಹೊಸ ಯೋಜನೆಯಡಿಯಲ್ಲಿ...
      • ►  Jun 16 (1)
        • ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್...
      • ►  Jun 14 (1)
        • ನಾಡು ಕಂಡ ಕಳಂಕರಹಿತ ರಾಜಕಾರಣಿ
      • ►  Jun 12 (4)
        • ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾ...
        • ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚ...
        • ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಮತ್ತೆ ಹ...
        • ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ ಅಲ್ಲವಾ?

Saturday, 10 November 2018

ನರೇಂದ್ರ ಮೋದಿಯವರ ಒಂದು ದಿನದ ಊಟದ ಖಚು೯ ಎಷ್ಟು ಗೊತ್ತಾ ಖಂಡಿತ ನಿಮಗೆ ಆಶ್ಚರ್ಯವಾಗುತ್ತದೆ



ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸದ ಕುರಿತು ಯಾವಾಗಲೂ ಚರ್ಚೆಯಲ್ಲಿ ದ್ದಾರೆ ಮತ್ತು 2019 ರಲ್ಲಿ ಪ್ರಧಾನಮಂತ್ರಿಯಾಗಲು ದೊಡ್ಡ ಅಭ್ಯರ್ಥಿ ಆಗಿರುತ್ತಾರೆ ಮತ್ತು ನಾವು ಅವ ರಿಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಸಂಗತಿಯನ್ನು ಹೇಳುತ್ತೇವೆ, ಆದ್ದರಿಂದ ಕೊನೆಯವರೆಗೂ ದಯವಿಟ್ಟು ಲೇಖನವನ್ನು ಓದಿ.


ಸರಕಾರದಿಂದ ಪ್ರತಿ ವರ್ಷವೂ ನರೇಂದ್ರ ಮೋದಿಗೆ 19 ಲಕ್ಷ ರೂ. ಗೆ ದೊರೆಯುತ್ತದೆ. ಇದರರ್ಥ ಅವರ ವೇತನ ಎಂದು ಕರೆಯಬಹುದು, ಅಂದರೆ ಅವರ 1 ವರ್ಷದ ವೇತನವು 1900000 ಆದರೆ ಆರ್ಟಿಐ ವರದಿಯ ಪ್ರಕಾರ ನರೇಂದ್ರ ಮೋದಿ ಅವರ ಆಹಾರ ವೆಚ್ಚಕ್ಕಾಗಿ ಸರ್ಕಾರದಿಂದ ಅವರು ಒಂದು ರೂಪಾಯಿ ಗಳನ್ನು ಸಹ ತೆಗೆದುಕೊಳ್ಳುವುದಿಲ್ಲ ಮತ್ತು ಊಟದ ಖರ್ಚನ್ನು ಸಂಬಳದೊಂದಿಗೆ ಕಳೆಯುತ್ತಾರೆ. ತಮ್ಮ ಆಹಾರವನ್ನು ಅಡುಗೆ ಮಾಡುವವರು ಸಹ ಗುಜರಾತ್ನಿಂದ ಬಂದಿದ್ದಾರೆ ಮತ್ತು ಆಹಾರವನ್ನು ನೀಡುತ್ತಾರೆ ಅವರ ಒಂದು ದಿನದ ಊಟದ ಖರ್ಚು ಸರಿಸುಮಾರು ಐದು ಸಾವಿರ ರೂಪಾಯಿಗಳಷ್ಟು ಆಗುತ್ತದೆ ವಿಶೇಷವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ಹಾರಗಳನ್ನು ಅವರಿಗೆ ನೀಡಲಾಗುತ್ತದೆ.
Posted by uuiojioj at 23:12 No comments:
Email ThisBlogThis!Share to XShare to FacebookShare to Pinterest

Sunday, 23 September 2018

ನಾಡು ಕಂಡ ಕಳಂಕರಹಿತ ರಾಜಕಾರಣಿ











 ನಾಡು ಕಂಡ ಕಳಂಕರಹಿತ ರಾಜಕಾರಣಿ ತಮ್ಮ ಕಾರ್ಯವೈಖರಿಯಿಂದ ರಾಷ್ಟ್ರರಾಜಕಾರಣದಲ್ಲಿ..
ಸಂಚಲನ ಮೂಡಿಸಿ.
ಗ್ರಾಮೀಣಾಭಿವ್ರದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಬ್ರಷ್ಟಚಾರದಿಂದಮುಕ್ತಗೊಳಿಸಿ
ಗ್ರಾಮೀಣಭಾಗದ ಜನಸಾಮಾನ್ಯರಿಗೂ
ಶುಧ್ದನೀರನ್ನು ಪೂರೈಸಿ......
ದೇಶದಲ್ಲಿಯೇ ಪ್ರಥಮವಾಗಿ
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಕರ್ನಾಟಕದಲ್ಲಿ ಜಾರಿಗೆತಂದು..
ಮಹತ್ತರ ಬದಲಾವಣೆ ಮಾಡಿ...ಕೇಂದ್ರ ಸರ್ಕಾರದಿಂದ ಸತತವಾಗಿ ನಾಲ್ಕುಬಾರಿ ಪ್ರಥಮ ಬಹುಮಾನವನ್ನು ಕರುನಾಡಿಗೆ ತಂದುಕೊಟ್ಟಂತಹ ಕೀರ್ತಿ
ಮಾನ್ಯ ಶ್ರೀ ಎಚ್.ಕೆ.ಪಾಟೀಲರವರಿಗೆ ಸಲ್ಲುತ್ತದೆ...
ಉತ್ತರ ಕರ್ನಾಟಕದ ಏಳಿಗೆಗೆ  ಜನ ಸಾಮಾನ್ಯರು ಯಚ್ಚೇತ್ತುಕೋಳ್ಳಬೇಕಿದೆ ಪಕ್ಷ ಗಳಿಗಾಗಿ ಗೂದ್ದಾಡುವ ಬದಲು ಉತ್ತರ ಕರ್ನಾಟಕದ ನಾಯಕರನ್ನು  ಬೆಳೆಸಬೇಕಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಪಥದತ್ತ ಸಾಗಬೇಕು ಯುವಕರು ಕೆಲಸಕ್ಕಾಗಿ ಗೂಳೆ ಹೋಗುವದನ್ನು ನಿಲ್ಲಿಸಬೇಕಿದೆ ನಮ್ಮಲ್ಲಿನೆ ಕೆಲಸಗಳನ್ನು ಹುಟ್ಟಿಸಬೇಕಿದೆ ಉತ್ತರ ಕರ್ನಾಟಕದ ಅತ್ಯಂತ ಪ್ರಭಾವಿ ನಾಯಕರು ಹಾಗೂ ಉತ್ತರ ಕರ್ನಾಟಕದ ವಿಷಯದಲ್ಲಿ ಕುಂದುಕೊರತೆಗಳು ಬಂದಾಗ ಧ್ವನಿ ಎತ್ತಿದವರು.ತಮಗೆ ದೊರೆತ ಕೆಲಸವನ್ನು ಅಚ್ಚುಕಟ್ಟಾಗಿ ನಿವ೯ಹಿಸಿ  ಸತತವಾಗಿ  ನಾಲ್ಕು ವರ್ಷಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಭಾರತ ದೇಶದಲ್ಲಿ ಪ್ರಥಮ ಸ್ಥಾನ ಪಡೆದು ಎದುರಾಳಿಗಳಿಂದಲೆ ಬೇಶ್ ಎಂದೆನಿಸಿಕೊಂಡ ಹೆಚ್ ಕೆ ಪಾಟೀಲ ರವರಂತಹ ನಾಯಕರಿಗೆ ಸಚಿವ ಸ್ಥಾನ ಕೊಡದೇ ಇರುವುದು  ನ್ಯಾಯವೇ?  
ಪ್ರಸ್ತುತ ಕರ್ನಾಟಕದ ಮೈತ್ರಿ ಸರ್ಕಾರದ ಸಚಿವ  ಸಂಪುಟ ರಚನೆಯ ವೇಳೆ ಕೊನೆಯ ಕ್ಷಣದಲ್ಲಿ   
ಎಚ್.ಕೆ.ಪಾಟೀಲರನ್ನು ಕೈ ಬಿಡಲಾಗಿದ್ದು ತೀವ್ರ ಬೇಸರವನ್ನುಂಟುಮಾಡಿದೆ......
ಮಾನ್ಯ ಶ್ರೀ ಎಚ್.ಕೆ.ಪಾಟೀಲರಿಗೆ
ಅತಿ ಶೀಘ್ರವಾಗಿ ಸಚಿವ ಸ್ಥಾನವನ್ನು ನೀಡಬೇಕೆಂದು ವರೀಷ್ಠರಲ್ಲಿ ವಿನಂತಿಸಿಕೋಳ್ಳುತ್ತೇವೆ..........
Posted by uuiojioj at 07:10 No comments:
Email ThisBlogThis!Share to XShare to FacebookShare to Pinterest

Thursday, 5 July 2018

ಬಹುನಿರೀಕ್ಷಿತ ರೈತರ ಸಾಲ ಮನ್ನಾ.ಪ್ರತಿ ರೈತ ಕುಟುಂಬದ ಎರಡು ಲಕ್ಷ ಮೊತ್ತದ ಹಣವನ್ನು ಮನ್ನಾ ಮಾಡಲಾಗಿದೆ, ರೈತರ ಸಾಲಮನ್ನಕ್ಕಾಗಿ ಸರಿ ಸುಮಾರು 34 ಸಾವಿರ ಹಣವನ್ನು ಸಾಲಮನ್ನಾಕ್ಕಾಗಿ ಮೀಸಲಿಡಲಾಗಿದೆ








ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ಚೊಚ್ಚಲ ಬಜೆಟ್ ಅಂತೂ ಮಂಡನೆಯಾಗಿದ್ದು, ರೈತರ 2 ಲಕ್ಷ ರೂ. ಸಾಲ ಮನ್ನಾ ಘೋಷಣೆಯೊಂದಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಮಾತನ್ನುಉಳಿಸಿಕೊಂಡಿದ್ದಾರೆ.

ಸಾಲ ಮನ್ನಾಕ್ಕಾಗಿ 34 ಸಾವಿರ ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಒಟ್ಟು 2, 13, 734 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿರುವ ಕುಮಾರಸ್ವಾಮಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿ ಆರಂಭಕ್ಕೆ ಮುಂದಾಗಿದ್ದಾರೆ.

ಮದ್ಯ, ಡೀಸೇಲ್ ದರದಲ್ಲಿ ಏರಿಕೆಯಾಗಿದ್ದು, ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಗೂ ಕುಮಾರಸ್ವಾಮಿ ಮುಂದಾಗಿದ್ದಾರೆ.

ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜತೆಗೆ ಮಂಡ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ

Posted by uuiojioj at 09:21 No comments:
Email ThisBlogThis!Share to XShare to FacebookShare to Pinterest

Tuesday, 26 June 2018

ಹೆಚ್ ಡಿ ಕುಮಾರಸ್ವಾಮಿಯವರ ನಡೆಗೆ ಸಿದ್ದರಾಮಯ್ಯ ಗರಂ?




ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೇಮಕಗೊಂಡಿದ್ದ ಅಧಿಕಾರಿಗಳನ್ನು ಕುಮಾರಸ್ವಾಮಿ ವರ್ಗಾವಣೆ ಮಾಡಿದ್ದಾರೆ. ಕೆಲವರನ್ನು ಅದಾಗಲೇ ಬೇರೆಡೆ ವರ್ಗಾಯಿಸಿದ್ದು, ಇನ್ನು ಕೆಲವರ ವರ್ಗಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದು ಸಿದ್ದರಾಮಯ್ಯಗೆ ಸಿಟ್ಟು ತಂದಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯಗೆ ಆಪ್ತ ಅಧಿಕಾರಿಗಳಾಗಿದ್ದ ಮೂವರನ್ನು ಸಿಎಂ ಕುಮಾರಸ್ವಾಮಿ ವರ್ಗಾಯಿಸಿದ್ದಾರೆ. ಇದು ಬೇಸರಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ಸಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್, ಬೆಂಗಳೂರು ಪಶ್ಚಿಮ ವಿಭಾಗದ ಉಪ ವಿಭಾಗಾಧಿಕಾರಿ ಜಗದೀಶ್ ಅವರ ಜತೆ ಅಧಿಕಾರಿ ಅತೀಕ್ ಗೌಡ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಇದು ಸಿದ್ದರಾಮಯ್ಯಗೆ ಅತೀವ ಕೋಪ ತರಿಸಿದೆ ಎನ್ನಲಾಗುತ್ತಿದೆ.

ರೋಹಿಣಿ ವರ್ಗಾವಣೆ:

ನ್ಯಾಯಾಲಯದ ಮಟ್ಟದ ಸಂಘರ್ಷಕ್ಕೆ ತೆರಳಿದ್ದರೂ, ಹಠ ಹಿಡಿದು ಹಾಸನದಿಂದ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸಿದ್ದರಾಮಯ್ಯ ವಾಪಸ್ ಪಡೆದಿರಲಿಲ್ಲ. ಸರ್ಕಾರಿ ವೆಚ್ಚದಲ್ಲಿ ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸುತ್ತಿದ್ದರು. ಆದರೆ ಕುಮಾರಸ್ವಾಮಿ ನಿನ್ನೆ ರೋಹಿಣಿ ಸಿಂಧೂರಿ ಅವರನ್ನು ಮರಳಿ ಹಾಸನಕ್ಕೆ ವರ್ಗಾವಣೆ ಮಾಡಿದ್ದಾರೆ.

ವರ್ಗಾವಣೆ ಮಾಡಿದ್ದ ಸಿದ್ದರಾಮಯ್ಯ ಹಾಗೂ ಮಾಡಿಸಿದ್ದ ಮಾಜಿ ಸಚಿವ ಎ. ಮಂಜುಗೆ ಇದು ದೊಡ್ಡ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಕೂಡ ಸಿದ್ದರಾಮಯ್ಯಗೆ ಸಾಕಷ್ಟು ಮುಜುಗರ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.



Posted by uuiojioj at 18:55 No comments:
Email ThisBlogThis!Share to XShare to FacebookShare to Pinterest

Monday, 25 June 2018

ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಿದೆ.





ಬೆಂಗಳೂರು,ಜೂ.25- ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಿದೆ. ಜುಲೈ 5ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಹಂತದಲ್ಲಿ ಸಣ್ಣ , ಅತಿಸಣ್ಣ ರೈತರು ಸಹಕಾರಿ, ಸಾರ್ವಜನಿಕ ವಲಯ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದೊಳಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಘೋಷಿಸಲಿದ್ದಾರೆ.

2ನೇ ಹಂತದಲ್ಲಿ ರೈತರು ಜಮೀನು ಹೊಂದಿರದೆ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದರೆ ಮಾತ್ರ ಮನ್ನಾವಾಗಲಿದೆ. ಈ ಬಾರಿ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಶ್ರೀಮಂತರು, ಆಸ್ತಿವಂತರು, ವ್ಯಾಪಾರ ವಹಿವಾಟು ನಡೆಸುವವರು, ನೌಕರರು ಹಾಗೂ ಹೆಚ್ಚು ಜಮೀನು ಹೊಂದಿರುವವರ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈಗಾಗಲೇ ಕುಮಾರಸ್ವಾಮಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಅಗತ್ಯ ಮಾಹಿತಿಯನ್ನು ಕಲೆ ಹಾಕಿದ್ದು , ರೈತರ ಸಾಲಮನ್ನಾ ಕುರಿತಂತೆ ರೈತರು ಯಾವ ಯಾವ ಬ್ಯಾಂಕ್‍ಗಳಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದರ ಬಗ್ಗೆ ವಿವರಣೆ ಪಡೆದಿದ್ದಾರೆ.ಸಹಕಾರಿ ಸೇರಿದಂತೆ ಮತ್ತಿತರ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಒಟ್ಟು 53 ಸಾವಿರ ಕೋಟಿ ಸಾಲವನ್ನಾ ಒಂದೇ ಹಂತದಲ್ಲಿ ಮನ್ನಾ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕಾಗಿ ಈ ಬಾರಿ ಸಾಲ ಮನ್ನಾ ಮಾಡುವ ಯೋಜನೆಗೆ ಹೊಸ ಷರತ್ತುಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಪಂಜಾಪ್-ಮಹಾರಾಷ್ಟ್ರ ಮಾದರಿ:
ಈ ಹಿಂದೆ ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತಂತೆ ಅಲ್ಲಿನ ಸರ್ಕಾರಗಳು ಕೆಲವು ಕಠಿಣ ಕ್ರಮ ತೆಗೆದುಕೊಂಡಿದ್ದರ ಪರಿಣಾಮ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿಲ್ಲ. ಜೊತೆಗೆ ನಿಜವಾದ ಫಲಾನುಭವಿಗಳು ಇದರ ಲಾಭವನ್ನು ಪಡೆಯುವಂತಾಯಿತು.
ಪಂಜಾಬ್‍ನಲ್ಲಿ ಅಲ್ಲಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಿದ್ದರು.

ಮೊದಲ ಹಂತದಲ್ಲಿ ಐದು ಎಕರೆಯೊಳಗಿನ ಸಣ್ಣ ಹಾಗೂ ಅತಿ ಸಣ್ಣ ರೈತರು ಪಡೆದಿದ್ದ 50 ಸಾವಿರ ರೂ. ಒಳಗಿನ ಸಾಲವನ್ನು ಮನ್ನ ಮಾಡಿತ್ತು. ಪರಿಣಾಮ ಬೊಕ್ಕಸಕ್ಕೂ ಹೊರೆಯಾಗಲಿಲ್ಲ. ಅಲ್ಲದೆ ಸರ್ಕಾರದ ಪ್ರಯೋಜನವನ್ನು ನಿಜವಾದ ಫಲಾನುಭವಿಗಳು ಪಡೆದಿದ್ದರಿಂದ ಮಧ್ಯವರ್ತಿಗಳ ಹಾವಳಿಯು ತಪ್ಪಿತು.
ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ ಮೊದಲು 5 ಎಕರೆ ಒಳಗಿರುವ ಭೂಮಿ ಹೊಂದಿರುವ ರೈತರ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಪ್ರಕಟಿಸಲಿದೆ.

ಮೀಟರ್ ಬಡ್ಡಿದಾರರಿಗೆ ಕಡಿವಾಣ:
ಬೆಳೆ ಸಾಲ ಮನ್ನಾದ ಹೆಸರಿನಲ್ಲಿ ಸಹಕಾರಿ ಬ್ಯಾಂಕ್‍ಗಳಿಂದ ಸಲ ಪಡೆದು ಬಡ್ಡಿ ವ್ಯವಹಾರ ನಡೆಸುತ್ತಿದ್ದ ಶ್ರೀಮಂತ ಇಲ್ಲವೇ ಜಮೀನುದಾರ ರೈತರ ಸಾಲಕ್ಕೆ ಕೊಕ್ಕೆ ಬೀಳಲಿದೆ. ಯಾರು ತಮ್ಮ ಖಾತೆಯಲ್ಲಿ ಎಷ್ಟು ಜಮೀನು ಹೊಂದಿದ್ದಾರೆ, ಇವರ ವಾರ್ಷಿಕ ವಹಿವಾಟು, ಎಲ್ಲೆಲ್ಲಿ ಸಾಲ ಪಡೆದಿದ್ದಾರೆ ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕುವಂತೆ ಸರ್ಕಾರ ಬ್ಯಾಂಕ್ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದೆ.

Posted by uuiojioj at 18:48 No comments:
Email ThisBlogThis!Share to XShare to FacebookShare to Pinterest

ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸರ್ಕಾರದಲ್ಲಿ ನೀವು ಹೆಚ್.ಡಿ ಕುಮಾರ ಸ್ವಾಮಿಯ ಮಾತಿನಂತೆ ನಡೆದುಕೊಳ್ಳುವುದಕ್ಕೆ ಮುಂದಾದರೆ ನನ್ನ ಬೆಂಬಲಿಗರ ಜೊತೆಗೆ ನಾನು ಏನು ಅಂತ ತೋರಿಸುವೆ






ಸ್ಪೆಷಲ್ ಡೆಸ್ಕ್: ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬರುತ್ತಿದ್ದ ಹಾಗೇ ದೋಸ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಖಾತೆ ಖ್ಯಾತೆ ಮುಗಿದ ನಂತರ ಶುರುವಾಗಿರುವುದು,  ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾ.

ಇವೆಲ್ಲದರ ನಡುವೆ ಧರ್ಮಸ್ಥಳದ ಶಾಂತಿನಿವಾಸದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಾ ರಾಜಕೀಯ ಚದುರಂಗಾಟವನ್ನು ಆಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಆದ ದಾಳವನ್ನು ಉರುಳುಸುತ್ತಿದ್ದಾರೆ.

ಇವೆಲ್ಲದರ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಹಿಡಿತವನ್ನು ಹೊಂದುವ ನಿಟ್ಟಿನಲ್ಲಿ ಬಜೆಟ್ ಹಾಗೂ ಸಾಲಮನ್ನ ಮಾಡುವುದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನೆನ್ನುವ ನಾನು ಒಬ್ಬ ಇದ್ದೇನೆ, ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸರ್ಕಾರದಲ್ಲಿ ನೀವು ಹೆಚ್.ಡಿ ಕುಮಾರ ಸ್ವಾಮಿಯ ಮಾತಿನಂತೆ ನಡೆದುಕೊಳ್ಳುವುದಕ್ಕೆ ಮುಂದಾದರೆ ನನ್ನ ಬೆಂಬಲಿಗರ ಜೊತೆಗೆ ನಾನು ಏನು ಅಂತ ತೋರಿಸುವೆ ಎನ್ನುವುದನ್ನು ಕೂಡ  ಹೈಕಮಾಂಡ್ ಗೆ ಸ್ಪಷ್ಟವಾಗಿ ರವಾನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಒಂದು ವೇಳೆ ಈ ಬಾರಿ ಏನಾದ್ರೂ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನದಂತಹ  ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದರೆ ತಾವು ಈ ಹಿಂದೆ ಮಾಡಿದ “ಭಾಗ್ಯ”ಗಳು ಕೊನೆಯಾಗಲಿದೆ. ಇದಲ್ಲದೇ ತಾವು ರೈತರ ಸಾಲಮನ್ನ ಘೋಷಣೆ ಕೂಡ  ನಾನು ಮುಖ್ಯಮಂತ್ರಿಯಾಗಿ ಮಾಡಿದ್ದ ಕೆಲಸವು ನೀರಿನಲ್ಲಿ ಕೊಚ್ಚಿಕೊಂಡ ಹಾಗೇ ಆಗುತ್ತದೆ. ನಾನು ರಾಜ್ಯದ ಜನತೆಗೆ ನೀಡಿರುವ “ಭಾಗ್ಯ”ಗಳು ಇನಷ್ಟು ದಿವಸಗಳ ಕಾಲ ಜನರ ಮನಸ್ಸಿನಲ್ಲಿ ಇರಬೇಕು, ಇದಕ್ಕೆ ಮುಂದಿನ ಲೋಕಸಭಾ ಚುನಾವಣೆಯ ತನಕ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು, ಜೊತೆಗೆ ತಮ್ಮ ಬೆಂಬಲಿಗರಿಗೆ ರಾಜ್ಯ ಸರ್ಕಾರದಲ್ಲಿ ಉತ್ತಮ ಸ್ಥಾನಗಳನ್ನು ಕೊಡಿಸಿ, ಆ ಮೂಲಕ ಕಾಂಗ್ರೆಸ್ ನಲ್ಲಿ ತಮ್ಮ ಹಿಡಿತವನ್ನು ಹಿಡಿದು ಇಟ್ಟುಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಇವೆಲ್ಲದರ ನಡುವೆ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಹಿರಂಗವಾಗಿ ಇಂದು ತಮ್ಮ ಬಜೆಟ್ ಹಾಗೂ ಸಾಲಮನ್ನಾವನ್ನು ಮಾಡುವ ಬಗ್ಗೆ ಸಿದ್ದರಾಮಯ್ಯ ಅವರು ಅಡ್ಡಕಾಲು ಹಾಕುತ್ತಿರುವುದಕ್ಕೆ ಬೇಸರ ವ್ಯಕ್ತವಾಗಿದೆ.



Posted by uuiojioj at 18:25 No comments:
Email ThisBlogThis!Share to XShare to FacebookShare to Pinterest

Tuesday, 19 June 2018

ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಈ ಹೊಸ ಯೋಜನೆಯಡಿಯಲ್ಲಿ 1.50 ಲಕ್ಷ ರೂ ವರೆಗಿನ ಉಚಿತ ಚಿಕಿತ್ಸೆ ಸಿಗಲಿದೆ.!



ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಈ ಹೊಸ ಯೋಜನೆಯಡಿಯಲ್ಲಿ 1.50 ಲಕ್ಷ ರೂ ವರೆಗಿನ ಉಚಿತ ಚಿಕಿತ್ಸೆ ಸಿಗಲಿದೆ.!

ಸರ್ಕಾರದಿಂದ ಸಾರ್ವಜನಿಕರ ಒಳಿತಿಗಾಗಿ ಹಾಗು ಬಡವರ ಹಾಗು ಮಧ್ಯಮವರ್ಗದವರ ಸಹಾಯಕ್ಕೆ ಸರ್ಕಾರ ಈ ಯೋಜನೆಯನ್ನು ತರುವ ಉದ್ದೇಶವನ್ನೊಂದಿದೆ. ಈ ಕಾರ್ಡ್ ಇದ್ರೆ ಸಾಕು ನೀವು ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ಕಟ್ಟುವ ಅವಶ್ಯಕತೆ ಇಲ್ಲ.
ಅಷ್ಟಕ್ಕೂ ಈ ಯೋಜನೆ ಯಾವುದು.? ಇದನ್ನು ಪಡೆಯುವುದು ಹೇಗೆ .? ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ನೋಡಿ..
ರಾಜ್ಯ ಸರ್ಕಾರ ಆರೋಗ್ಯಭಾಗ್ಯ ಅನ್ನೋ ಯೋಜನೆಯನ್ನು ರೂಪಿಸಿದೆ ಈ ಯೋಜನೆಯಡಿಯಲ್ಲಿ ನೀವು ಉಚಿತ ಚಿಕಿತ್ಸೆ ಸೌಲಭ್ಯವನ್ನು ಪಡೆಯಬುದು.
ಆಸ್ಪತ್ರೆಗಳಲ್ಲಿ ಯುನಿವರ್ಸೆಲ್ ಹೆಲ್ತ್ ಕಾರ್ಡ್ ಎಂಬುದಾಗಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೊಡಬೇಕಾದ ದಾಖಲಾತಿ ರೇಷನ್ ಕಾರ್ಡ್ ವೋಟರ್ ID ಹಾಗು ೧೦ ರೂಪಾಯಿ ಕೊಟ್ಟು ಈ ಕಾರ್ಡ್ ಪಡೆಯಬೇಕು. ಈ ಯೋಜನೆಯಡಿಯಲ್ಲಿ BPL ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಿರುತ್ತದೆ, APL ಕಾರ್ಡ್ ಹೊಂದಿರುವರು 30 % ರಿಯಾಯಿತಿ ಪಡೆದು ಚಿಕಿತ್ಸೆ ಪಡೆಯಬೇಕಾಗುತ್ತದೆ.
ನಿಗದಿತ ದ್ವಿತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.30.000/-ಗಳ ಚಿಕಿತ್ಸೆ.  ನಿಗದಿ ತೃತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.1.50.000/-ಗಳು ಈ ಹಣ ಮುಗಿದ ನಂತರ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ರೂ.50.000/-ಗಳ ಚಿಕಿತ್ಸೆ,

Posted by uuiojioj at 20:51 No comments:
Email ThisBlogThis!Share to XShare to FacebookShare to Pinterest

Saturday, 16 June 2018

ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಆಕ್ರೋಶಕ್ಕೆ ಬಲಿಯಾಗುತ್ತಾ...?




ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಉತ್ತರ ಕರ್ನಾಟಕದ ಜನರ ಆಕ್ರೋಶಕ್ಕೆ ಬಲಿಯಾಗುತ್ತಾ...?    
  ಕನಾ೯ಟಕವೆ ಹೇಮ್ಮೆ ಪಡುವಂತೆ ಗ್ರಾಮೀಣ ಅಭಿವೃದ್ಧಿಗಾಗಿ ಬೇಕಾದಂತಹ ಮೂಲಸೌಕರ್ಯಗಳನ್ನು ಒದಗಿಸಿ ಗ್ರಾಮೀಣ ಪಂಚಾತಿಗಳಿಗೆ ಡಿಜಲಿಟಿ ಕರಣಗೋಳಿಸಿ ಗ್ರಾಮೀಣ ಪಂಚಾತಿಗಳಲ್ಲಿ ಕಡಿಮೆ ಸಂಬಳಕ್ಕೆ ದಿನವಿಡಿ ದುಡಿಯುತ್ತಿದ್ದ ಹೋರಗುತ್ತಿಗೆ ನೌಕರರನ್ನು ಕಾಯಂಗೋಳಿಸುವ ಮೂಲಕ ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಸ್ಪಂದಿಸಿದ್ದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು ನಮ್ಮ ಶ್ರೀ  ಮಾನ್ಯ ಹೆಚ್.ಕೆ.ಪಾಟೀಲರವರು ಆದುದರಿಂದಲೇ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಸತತವಾಗಿ ನಾಲ್ಕು ವರ್ಷಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಭಾರತ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. 


ಇಷ್ಟಾದರೂ ಶ್ರೀ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಈ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೂಡದೇ ಇರುವುದು  ಎಷ್ಟರ ಮಟ್ಟಿಗೆ ಸರಿ.ಇದು ನಮ್ಮ ನಾಯಕರಿಗೆ ಮಾಡಿದ ಅನ್ಯಾಯ ಅಲ್ಲವೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮತ್ತು ಕರ್ನಾಟಕದ ಗ್ರಾಮೀಣ ಜನತೆಗೆಮಾಡಿದ ಅನ್ಯಾಯ ಅಲ್ಲವೆ ಇದನ್ನೇ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್ಕಾರ ಜನಾಆಕ್ರೋಶಕ್ಕೆ ಬಲಿಯಾಗದೆ ಇರತ್ತಾ ಇದು ರಾಜ್ಯ ಮತ್ತು ಕೇಂದ್ರ ದ ನಾಯಕರು ಇದನ್ನು ಸರಿಪಡಿಸಿ ಶ್ರೀ. ಹೆಚ್. ಕೆ ಪಾಟೀಲ ರಿಗೆ ಸಚಿವ ಸ್ಥಾನ ಕೊಡಲೇಬೇಕು.ಕೂಡುವವರೆಗೂ ಎಲ್ಲರೂ
 ಶೇರ ಮಾಡಿ.
Posted by uuiojioj at 21:27 No comments:
Email ThisBlogThis!Share to XShare to FacebookShare to Pinterest

Thursday, 14 June 2018

ನಾಡು ಕಂಡ ಕಳಂಕರಹಿತ ರಾಜಕಾರಣಿ




ನಾಡು ಕಂಡ ಕಳಂಕರಹಿತ ರಾಜಕಾರಣಿ ತಮ್ಮ ಕಾರ್ಯವೈಖರಿಯಿಂದ ರಾಷ್ಟ್ರರಾಜಕಾರಣದಲ್ಲಿ..
ಸಂಚಲನ ಮೂಡಿಸಿ.
ಗ್ರಾಮೀಣಾಭಿವ್ರದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಬ್ರಷ್ಟಚಾರದಿಂದಮುಕ್ತಗೊಳಿಸಿ
ಗ್ರಾಮೀಣಭಾಗದ ಜನಸಾಮಾನ್ಯರಿಗೂ
ಶುಧ್ದನೀರನ್ನು ಪೂರೈಸಿ......
ದೇಶದಲ್ಲಿಯೇ ಪ್ರಥಮವಾಗಿ
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಕರ್ನಾಟಕದಲ್ಲಿ ಜಾರಿಗೆತಂದು..
ಮಹತ್ತರ ಬದಲಾವಣೆ ಮಾಡಿ...ಕೇಂದ್ರ ಸರ್ಕಾರದಿಂದ ಸತತವಾಗಿ ನಾಲ್ಕುಬಾರಿ ಪ್ರಥಮ ಬಹುಮಾನವನ್ನು ಕರುನಾಡಿಗೆ ತಂದುಕೊಟ್ಟಂತಹ ಕೀರ್ತಿ
ಮಾನ್ಯ ಶ್ರೀ ಎಚ್.ಕೆ.ಪಾಟೀಲರವರಿಗೆ ಸಲ್ಲುತ್ತದೆ...
ಪ್ರಸ್ತುತ ಕರ್ನಾಟಕದ ಮೈತ್ರಿ ಸರ್ಕಾರದ ಸಚಿವ  ಸಂಪುಟ ರಚನೆಯ ವೇಳೆ ಕೊನೆಯ ಕ್ಷಣದಲ್ಲಿ   
ಎಚ್.ಕೆ.ಪಾಟೀಲರನ್ನು ಕೈ ಬಿಡಲಾಗಿದ್ದು ತೀವ್ರ ಬೇಸರವನ್ನುಂಟುಮಾಡಿದೆ......
ಮಾನ್ಯ ಶ್ರೀ ಎಚ್.ಕೆ.ಪಾಟೀಲರಿಗೆ
ಅತಿ ಶೀಘ್ರವಾಗಿ ಸಚಿವ ಸ್ಥಾನವನ್ನು ನೀಡಬೇಕೆಂದು ವರೀಷ್ಠರಲ್ಲಿ ವಿನಂತಿಸಿಕೋಳ್ಳುತ್ತೇವೆ..........
Posted by uuiojioj at 10:16 No comments:
Email ThisBlogThis!Share to XShare to FacebookShare to Pinterest

Tuesday, 12 June 2018

ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ

ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ


ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ


ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ತಮ್ಮ ವಿರುದ್ಧ ಭೋಗಸ್ ಮತದಾನದ ಆರೋಪ ಹೊರಿಸಿದ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಮೊನ್ನೆಯಷ್ಟೇ ಗದಗದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಿ ಶ್ರೀರಾಮುಲು ಎಚ್ ಕೆ ಪಾಟೀಲ್ ಭೋಗಸ್ ಮತ ಹಾಕಿದ್ದ ಗೆದ್ದಿದ್ದಾರೆ. ಈ ಬಗ್ಗೆ ಬಿಜೆಪಿ ವತಿಯಿಂದ ಚುನಾವಣಾಧಿಕಾರಿಗಳಿಗೆ ದೂರು ನೀಡಿ ಅವರ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯಿಸಲಾಗುವುದು ಎಂದಿದ್ದರು.

ಇದಕ್ಕೆ ಸಿಟ್ಟಿಗೆದ್ದಿರುವ ಶಾಸಕ ಎಚ್ ಕೆ ಪಾಟೀಲ್, ಇಷ್ಟಕ್ಕೇ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅಸ್ತ್ರಕ್ಕೆ ಪ್ರತಿ ಅಸ್ತ್ರ ಸಿದ್ಧವಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರವಿಲ್ಲ. ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.
Posted by uuiojioj at 18:06 No comments:
Email ThisBlogThis!Share to XShare to FacebookShare to Pinterest

ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚಿವ! ಯಾರು ಆ ಮಂತ್ರಿ?

ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚಿವ! ಯಾರು ಆ ಮಂತ್ರಿ?

ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹಿಂದುಳಿದ ವರ್ಗಗಳ ಖಾತೆಯ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ. ಇಂದು ವರುಣಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಪುಟ್ಟರಂಗ ಶೆಟ್ಟಿ, ಉಪ್ಪಾರರು ವಿಧಾನಸೌದದ ಮೆಟ್ಟಿಲು ತುಳಿದಿದ್ದಾರೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ನಾನು ಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯನವರಿಂದ. ಹೀಗಾಗಿ ನನ್ನ ಪಾಲಿಗೆ ಅವರೇ ಮುಖ್ಯಮಂತ್ರಿಗಳು ಎಂದು ಸಚಿವ ಪುಟ್ಟರಂಗಶೆಟ್ಟಿ ಬಹಿರಂಗವಾಗಿ ಹೇಳಿದರು.



ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಧರ್ಮಸೇನಾ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗದಿದ್ದರೂ ಮುಖ್ಯಮಂತ್ರಿಗಿಂತಲೂ ಉನ್ನತ ಸ್ಥಾನವಾದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದು ನಮಗೆ ಸಾಕು. ಜೊತೆಯಲ್ಲಿದ್ದವರೇ ಮೋಸ ಮಾಡಿದಾಗ ನೋವಾಗುತ್ತೆ. ಆದರೆ ನೀವು ಚಾಮುಂಡೇಶ್ವರಿ ಸೋಲಿನಿಂದ ಎದೆಗುಂದಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಅಲ್ಲದೇ ನಾನು ಮೊದಲೇ ಹೇಳಿದ್ದೆ ಚಾಮುಂಡೇಶ್ವರಿ ಕ್ಷೇತ್ರ ಬೇಡ ಎಂದು, ಆದರೆ ನನಗೆ ಭಯವಿಲ್ಲ ನಿನಗೇಕೆ ಭಯ ಎಂದು ನನ್ನನ್ನು ಸುಮ್ಮನಾಗಿಸಿದ್ದರು. ಈಗ ಇಲ್ಲಿನ ಜನರೇ ಕೈ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು.
Posted by uuiojioj at 13:08 No comments:
Email ThisBlogThis!Share to XShare to FacebookShare to Pinterest


ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಮತ್ತೆ ಹಾಕ್ತೀಯಾ?: ಅಭಿಮಾನಿಗೆ ಸಿದ್ದರಾಮಯ್ಯ ಪ್ರಶ್ನೆ!


ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಬಂದು ಮೈತ್ರಿ ಸರ್ಕಾರ ಬಂದ ನಂತರ ಅಧಿಕಾರದಿಂದ ದೂರ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ನಿರೀಕ್ಷಿತ ಮಟ್ಟದಲ್ಲಿ ಪಲಿತಾಂಶ ಬಾರದ ಕಾರಣ ಕಾಂಗ್ರೆಸ್ ನಲ್ಲಿ ಇದೀಗ ತನ್ನ ಹಿಂದಿನ ಪ್ರಭಾವ ಉಳಿಸಿಕೊಂಡಿಲ್ಲ, ಬೇರೆ ನಾಯಕರು ಓವರ್ ಟೇಕ್ ಮಾಡಲು ತುದಿಗಾಲಿನಲ್ಲಿ ನಿಂತಿರುವುದು ಗೊತ್ತೇ ಇದೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯನವರು ‘ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಯಾಕೆ ಈಗ ಮತ್ತೆ ಟೋಪಿ ಹಾಕ್ತಿಯಪ್ಪ’ ಎಂದು ಸನ್ಮಾನ ಮಾಡಲು ಬಂದ ಅಭಿಮಾನಿಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಣಲು ಮೈಸೂರಿನ ನಿವಾಸಕ್ಕೆ ಆಗಮಿಸಿದ ಅಭಿಮಾನಿ ಸರ್, ನಿಮಗೆ ಸನ್ಮಾನ ಮಾಡಬೇಕು ಎಂದಿದ್ದಾನೆ ಆಗ ಸಿದ್ದರಾಮಯ್ಯ ಕೈ ಸನ್ನೆ ಮೂಲಕ ಬಾ ಎಂದು ಕರೆದಿದ್ದಾರೆ. ಶಾಲು ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋಗಾದ ಹೇ ಇದೆಲ್ಲಾ ಯಾಕಪ್ಪ ಎಂದ ಸಿದ್ದರಾಮಯ್ಯ, ಜನರೇ ಟೋಪಿ ಹಾಕಿದ್ರು. ಇದೆಲ್ಲ ಯಾಕಪ್ಪ ಅಂತಾ ನಗುತ್ತಲೇ ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡರು.
Posted by uuiojioj at 11:33 No comments:
Email ThisBlogThis!Share to XShare to FacebookShare to Pinterest

ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ ಅಲ್ಲವಾ?


ಭಾರತ ದೇಶದಲ್ಲಿ ಸತತ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟಾದರೂ
    ಶ್ರೀ  ಮಾನ್ಯ ಹೆಚ್.ಕೆ.ಪಾಟೀಲ ರವರಿಗೆ ಈ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೂಡದೇ ಇರುವುದು  ಎಷ್ಟರ ಮಟ್ಟಿಗೆ ಸರಿ.ಇದು ನಮ್ಮ ನಾಯಕರಿಗೆ ಮಾಡಿದ ಅನ್ಯಾಯ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ
 ರಾಜ್ಯ ಮತ್ತು ಕೇಂದ್ರ ದ ನಾಯಕರು ಇದನ್ನು ಸರಿಪಡಿಸಿ ಶ್ರೀ. ಹೆಚ್. ಕೆ ಪಾಟೀಲ ರಿಗೆ ಸಚಿವ ಸ್ಥಾನ ಕೊಡಲೇಬೇಕು.
   ಎಲ್ಲರೂ ಶೇರ ಮಾಡಿ
Posted by uuiojioj at 08:17 1 comment:
Email ThisBlogThis!Share to XShare to FacebookShare to Pinterest
Newer Posts Home
Subscribe to: Posts (Atom)

Blog Archive

  • ►  2020 (4)
    • ►  February (3)
      • ►  Feb 24 (1)
      • ►  Feb 11 (1)
      • ►  Feb 08 (1)
    • ►  January (1)
      • ►  Jan 01 (1)
  • ►  2019 (1)
    • ►  April (1)
      • ►  Apr 07 (1)
  • ▼  2018 (13)
    • ▼  November (1)
      • ▼  Nov 10 (1)
        • ನರೇಂದ್ರ ಮೋದಿಯವರ ಒಂದು ದಿನದ ಊಟದ ಖಚು೯ ಎಷ್ಟು ಗೊತ್ತಾ ಖಂ...
    • ►  September (1)
      • ►  Sept 23 (1)
        • ನಾಡು ಕಂಡ ಕಳಂಕರಹಿತ ರಾಜಕಾರಣಿ
    • ►  July (1)
      • ►  Jul 05 (1)
        • ಬಹುನಿರೀಕ್ಷಿತ ರೈತರ ಸಾಲ ಮನ್ನಾ.ಪ್ರತಿ ರೈತ ಕುಟುಂಬದ ಎರಡು...
    • ►  June (10)
      • ►  Jun 26 (1)
        • ಹೆಚ್ ಡಿ ಕುಮಾರಸ್ವಾಮಿಯವರ ನಡೆಗೆ ಸಿದ್ದರಾಮಯ್ಯ ಗರಂ?
      • ►  Jun 25 (2)
        • ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ...
        • ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸ...
      • ►  Jun 19 (1)
        • ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಈ ಹೊಸ ಯೋಜನೆಯಡಿಯಲ್ಲಿ...
      • ►  Jun 16 (1)
        • ಇದೆ ರೀತಿ ಉದ್ದಟನ ಮುಂದುವರಿಸಿದ್ದೆ ಆದಲ್ಲಿ ಈ ಸಮೀಶ್ರ ಸರ್...
      • ►  Jun 14 (1)
        • ನಾಡು ಕಂಡ ಕಳಂಕರಹಿತ ರಾಜಕಾರಣಿ
      • ►  Jun 12 (4)
        • ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾ...
        • ನನಗೆ ಈಗಲೂ ಮಾನ್ಯ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದ ಸಚ...
        • ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಮತ್ತೆ ಹ...
        • ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯ ಅಲ್ಲವಾ?

H K Patil Supporters

H K Patil Supporters
Watermark theme. Powered by Blogger.